ಆಝಾದ್ ಮೈದಾನ್ ಒಂದು ತ್ರಿಕೋಣಾಕಾರದ ದಕ್ಷಿಣ ಬೊಂಬಾಯಿನಲ್ಲಿ ಸ್ಥಾಪಿಸಿರುವ ಅತಿ ಹಳೆಯ ಆಟದ ಮೈದಾನಗಳಲ್ಲೊಂದು.(ಇದನ್ನು ಹಿಂದೆ ಬಾಂಬೆ ಜಮ್ಖಾನದ ಮೈದಾನ ಎಂಬ ಹೆಸರಿನಿಂದ ಕರೆಯುತ್ತಿದ್ದರು.) ಈ ಮೈದಾನವು ಇಂಟರ್ ಸ್ಕೂಲ್ ಕ್ರಿಕೆಟ್ ಪಂದ್ಯಗಳಿಗೆ ಮೀಸಲಾಗಿತ್ತು. ಪರ್ಶಿಯನ್ ಭಾಷೆಯಲ್ಲಿ 'ಆಝಾದ್' ಎಂದರೆ ಸ್ವಾತಂತ್ರ್ಯ ಎನ್ನುವ ಅರ್ಥ. ಈ ಮೈದಾನದ ಕ್ರಿಕೆಟ್ ಪಿಚ್ ಯಾವುದೇ ಪಂಗಡದ ಆಟಕ್ಕೆ ಬಹಳ ಅಚ್ಚುಕಟ್ಟಾಗಿ ಹೊಂದಿಕೆಯಾಗುತ್ತಿತ್ತು. ಕ್ರಿಕೆಟ್ ಅಲ್ಲದೆ,ಕಾರ್ಮಿಕರ ಮುಷ್ಕರಗಳನ್ನು ಆಯೋಜಿಸಲು, ರ್‍ಯಾಲಿಗಳನ್ನು ನಡೆಸಲು, ಆಝಾದ್ ಮೈದಾನವನ್ನು ಹೆಚ್ಚಾಗಿ ಬಳಸುತ್ತಿದ್ದರು. 'ಬಾಂಬೆ ಜಮ್ಖಾನ ಕ್ಲಬ್ ಹೌಸ್' ನ್ನು ಸನ್. ೧೮೭೫ ರಲ್ಲಿ ಆಝಾದ್ ಮೈದಾನದ ದಕ್ಷಿಣ ಭಾಗದಲ್ಲಿ ನಿರ್ಮಿಸಲಾಗಿತ್ತು. == ಎಸ್ಪ್ಲನೇಡ್ == 'ಎಸ್ಪ್ಲನೇಡ್ ಎಂದು ಹೆಸರಿಸಲಾದ ಭಾರಿ ಮೈದಾನದ ಭಾಗವನ್ನು 'ಒವಲ್ ಮೈದಾನ್ ', 'ಆಝಾದ್ ಮೈದಾನ್' 'ಕೊಪರೇಜ್ ಮೈದಾನ್' 'ಕ್ರಾಸ್ ಮೈದಾನ'ಗಳು ಆಕ್ರಮಿಸಿಕೊಂಡಿದ್ದವು. == ಎಲ್ಲಕ್ಕೂ ತಕ್ಕ ಮೈದಾನ == ೨೦ ನೆಯ ಶತಮಾನದ ಪೂರ್ವಾರ್ಧದವರೆವಿಗೂ, ಈ ಮೈದಾನ ಹಲವಾರು ಕಾರ್ಯಕ್ರಮಗಳಿಗೆ ತಕ್ಕ ಸ್ಥಳವಾಗಿತ್ತು. ನಮ್ಮ ರಾಷ್ಟ್ರದ ಮಹಾನ್ ಸ್ವತಂತ್ರ್ಯ ಸೇನಾನಿ, ಮಹಾತ್ಮಾ ಗಾಂಧಿಯವರು ಕ್ರಾಸ್ ಮೈದಾನದಲ್ಲಿ ಸನ್. ೧೯೩೧ ರ ಡಿಸೆಂಬರ್ ಲ್ಲಿ ಭಾರಿ ಸಭೆಯನ್ನು ಉದ್ದ್ಯೇಶಿಸಿ ಭಾಷಣ ಮಾಡಿದ್ದರು. ಇಷ್ಟು ಜನರಿದ್ದ ಮಹಾಸಭೆ ಅಪರೂಪದ್ದಾಗಿತ್ತು. == ಕ್ರಿಕೆಟ್ ಆಟಕ್ಕಾಗಿಯೇ ಹೆಚ್ಚು ಬಳಕೆ == ೨೨ ಕ್ರಿಕೆಟ್ ಪಿಚ್ ಗಳಲ್ಲಿ ಮ್ಯಾಚ್ ಆಡುವ ವ್ಯವಸ್ಥೆ ಕಲ್ಪಿಸಿಕೊಂಡಿರುವ ಈ ಮೈದಾನದಲ್ಲಿ ಕ್ರಿಕೆಟ್ ಆಟದಲ್ಲಿ ನಿಷ್ಣಾತರಾದ ಅಂತಾರಾಷ್ಟ್ರೀಯ ಮಟ್ಟದ ಆಟಗಾರರು ಹಲವರಿದ್ದಾರೆ. ಸನ್. ೧೯೮೭, ರಲ್ಲಿ ಸಚಿನ್ ತೆಂಡುಲ್ಕರ್ ಮತ್ತು ವಿನೋದ್ ಕಾಂಬ್ಲಿ ತಮ್ಮ 'ಹ್ಯಾರಿಸ್ ಶೀಲ್ಡ್ ಕ್ರಿಕೆಟ್ ಪ್ರತಿಯೋಗಿತೆ'ಯ ಸಮಯದ ಆಟದಲ್ಲಿ ೬೬೪ ರನ್ ಗಳ ಭಾಗೀದಾರಿಕೆಯಲ್ಲಿ ಒಂದು ದಾಖಲೆಯನ್ನೇ ಸೃಷ್ಟಿಸಿದರು. == ಇವನ್ನೂ ಓದಿ == (ಇಂಗ್ಲೀಷ್ ವಿಕಿಪೀಡಿಯದ ಸೌಜನ್ಯ.) ^ , . . . (1983). .. , : . . . 116. 81-7154-246-8. ^ " ". . 27 2009. 30 2012. ^ , (2006). : . . . 124. 0-415-35691-1. ^ , (2008). : , . . . 572. 81-8069-574-3. ^ " ". . 27 2009. 30 2012. ^ , (2001). : . . . . 112. 81-900602-6-0. ^ , (2009). ( ) 3 / . . . 125. 90-8506-694-8. ^ . , (2005). . . . 38. 1-4179-9043-0. ^ "’ ". . 22 2010. 28 2012. ^ " ". . 9 2010. 28 2012. -. : 18°56′25″ 72°49′54″ == ಉಲ್ಲೇಖಗಳು == ‍